ವಿಟ್ಲ: ಬಿಲ್ಲವ ಸಂಘ (ರಿ.) ಕುಂಡಡ್ಕ ವಿಟ್ಲ ಮುಡ್ನೂರು ಕುಳ ಬಂಟ್ವಾಳ ಇದರ 24 ನೇ ವರ್ಷದ ಶ್ರೀ ಗಣಪತಿ ಹವನ ಮತ್ತು ಬ್ರಹ್ಮಶ್ರೀ ನಾರಾಯಣ ಗುರುದೇವ ಪೂಜೆ ಡಿ.8 ರಂದು ಕುಂಡಡ್ಕ ದ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದಲ್ಲಿ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಶ್ರೀ ಶಬರಿ ಯುವಕ ಮಂಡಲ ಮಾಡತ್ತಡ್ಕ ಮತ್ತು ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಇವರಿಂದ ಗುರುನಾಮ ಸಂಕೀರ್ತನೆ ನಡೆಯಲಿದ್ದು 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ ನಡೆಯಲಿದ್ದು ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಸರಿಯಾಗಿ ನಂಬಿಕೆದಾಯೆ ಎಂಬ ತುಳು ನಾಟಕ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.