ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಇಂಡೋನೇಷ್ಯಾದ ಬಾಲಿಯಲ್ಲಿರುವ ಜನಪ್ರಿಯ ಪ್ರವಾಸಿ ತಾಣದಲ್ಲಿ ದೈತ್ಯ ಮರವೊಂದು ಬಿದ್ದು ಇಬ್ಬರು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಮಂಗಳವಾರ ಉಬುದ್ನಲ್ಲಿರುವ ಸೇಕ್ರೆಡ್ ಮಂಕಿ ಫಾರೆಸ್ಟ್ನಲ್ಲಿ ಸ್ಥಳೀಯ ಸಮಯ ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಇದು ದ್ವೀಪದ ಜನಪ್ರಿಯ ತಾಣವಾಗಿದ್ದು, ಪ್ರವಾಸಿಗರು ಮಂಗಗಳನ್ನು ಹತ್ತಿರದಿಂದ ನೋಡಬಹುದು.
ಬಾಲಿಯ ಮಂಕಿ ಫಾರೆಸ್ಟ್ನಲ್ಲಿ ಪ್ರವಾಸಿಗರ ಮೇಲೆ ಬೃಹತ್ ಮರ ಬಿದ್ದಿದೆ. ಇದರ ವೀಡಿಯೊ ಇಂಟರ್ನೆಟ್ ಅಲ್ಲಿ ಹರಿದಾಡುತ್ತಿದೆ. ಸ್ಥಳೀಯ ವರದಿಗಳ ಪ್ರಕಾರ, ಇಬ್ಬರು ವಿದೇಶಿ ಪ್ರಜೆಗಳಾದ ಫ್ರಾನ್ಸ್ನ ಎಫ್. ಜಸ್ಟಿನ್ ಕ್ರಿಸ್ಟಿನ್ ಮತ್ತು ದಕ್ಷಿಣ ಕೊರಿಯಾದ ಕಿಮ್ ಹ್ಯೋಯುನ್ ಇಬ್ಬರೂ ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಲಿಯಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯದ ಬಗ್ಗೆ ಜನರಲ್ಲಿ ಕಳವಳವನ್ನು ಉಂಟುಮಾಡಿದೆ. ಒಂದು ವೀಡಿಯೊದಲ್ಲಿ, ಪ್ರವಾಸಿಗರ ಗುಂಪು ಕಾಡಿನ ಉದ್ಯಾನವನದಲ್ಲಿ ನಡೆದಾಡುತ್ತಿರುವುದನ್ನು ನೋಡಬಹುದು. ಆಗ ಅವರಿಗೆ ದೊಡ್ಡ ಶಬ್ದ ಕೇಳಿ ಅಲ್ಲಿಂದ ಓಡತೊಡಗಿದರು. ಆಗ ಮರವೊಂದು ಉರುಳಿಬಿದ್ದು, ಮಾರ್ಗವನ್ನು ಬಂದ್ ಮಾಡಿದೆ.
ಮಂಗಳವಾರ ಬಾಲಿಯ ಪ್ರಸಿದ್ಧ ಮಂಕಿ ಫಾರೆಸ್ಟ್ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಬೃಹತ್ ಮರವೊಂದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಬಲವಾದ ಗಾಳಿ ಮತ್ತು ಭಾರೀ ಮಳೆಯ ನಡುವೆ ಸಂಭವಿಸಿದ ಘಟನೆಯ ವೀಡಿಯೊ ಇಂಟರ್ನೆಟ್ ಅನ್ನು ಬೆಚ್ಚಿಬೀಳಿಸಿದೆ. ಪ್ರಶಾಂತ ವಾತಾವರಣ ಮತ್ತು ಮಕಾಕ್ಗಳಿಗೆ ಹೆಸರುವಾಸಿಯಾದ ಜನಪ್ರಿಯ ತಾಣವಾದ ಉಬುಡ್ನ ಸ್ಕೇರ್ಡ್ ಮಂಕಿ ಫಾರೆಸ್ಟ್ ಅಭಯಾರಣ್ಯದಲ್ಲಿ ಈ ಘಟನೆ ಸಂಭವಿಸಿದೆ.