ಪ್ರೇಮಕ್ಕೆ ಕಣ್ಣಿಲ್ಲ ಅಂತ ಹೇಳ್ತಾರೆ ಅದೇ ರೀತಿ ರೀತಿಯಲ್ಲಿ ಬಿದ್ದವರೂ ಕೂಡಾ ಜಗತ್ತಿನ ಪರಿಜ್ಞಾನವೇ ಇಲ್ಲದೆ ಎಲ್ಲೆಂದರಲ್ಲಿ ಮಿತಿ ಮೀರಿ ವರ್ತಿಸುತ್ತಿರುತ್ತಾರೆ. ಹೌದು ಕೆಲ ಪ್ರೇಮಿಗಳು, ರೈಲು, ಮೆಟ್ರೋ, ಬಸ್, ಪಾರ್ಕ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಕ್ಯಾರೇ ಅನ್ನದೇ ಅಸಭ್ಯ ವರ್ತನೆಯನ್ನು ತೋರುತ್ತಿರುತ್ತಾರೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಮತ್ತೊಂದು ಇಂತಹದ್ದೇ ಘಟನೆ ನಡೆದಿದ್ದು, ಮೆಟ್ರೋ ನಿಲ್ದಾಣದಲ್ಲಿ ಪ್ರೇಮಿಗಳಿಬ್ಬರು ಲೋಕದ ಪರಿವೇ ಇಲ್ಲದೆ, ಎಲ್ಲರೆದುರಲ್ಲೇ ಪರಸ್ಪರ ಬಿಗಿಯಾಗಿ ತಬ್ಬಿಕೊಂಡು ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪ್ರೇಮಿಗಳಿಬ್ಬರ ಈ ಅತಿಯಾದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕೋಲ್ಕತ್ತಾದ ಕಾಳಿಘಾಟ್ ಮೆಟ್ರೋ ಸ್ಟೇಷನ್ನಲ್ಲಿ ಈ ಘಟನೆ ನಡೆದಿದ್ದು, ಪ್ರೇಮಿಗಳಿಬ್ಬರು ಲೋಕದ ಪರಿವೇ ಇಲ್ಲದೆ ಪರಸ್ಪರ ತಬ್ಬಿಕೊಂಡು ಲಿಪ್ ಲಾಕ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇವರ ರೊಮ್ಯಾನ್ಸ್ ಕಂಡು ಅಲ್ಲಿದ್ದವರು ಫುಲ್ ಶಾಕ್ ಆಗಿದ್ದಾರೆ.
ಶುಭಾಂಗಿ ಪಂಡಿತ್ (Babymishra_) ಪಂಡಿತ್ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೆಟ್ರೋ ಸ್ಟೇಷನ್ನಲ್ಲಿ ಇತರೆ ಪ್ರಯಾಣಿಕರ ಎದುರಲ್ಲೇ ಪ್ರೇಮಿಗಳಿಬ್ಬರು ಪರಸ್ಪರ ತಬ್ಬಿಕೊಂಡು ಲಿಪ್ ಲಾಕ್ ಮಾಡುತ್ತಾ ರೊಮ್ಯಾನ್ಸ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.


























