ಮುಂಬೈನ ದಾದಾರ್ ರೇಲ್ವೆ ಸ್ಟೇಷನ್ನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಸೋಮವಾರದಂದು ಈ ರೈಲ್ವೆ ನಿಲ್ದಾಣದಲ್ಲಿ ಆಗಂತುಕನೊಬ್ಬ ಕಾಲೇಜು ಹುಡುಗಿಯ ತಲೆಗೂದಲು ಕತ್ತರಿಸಿ ಓಡಿ ಹೋದ ಘಟನೆ ನಡೆದಿದೆ. ಈ ಒಂದು ಘಟನೆ 2017ರಲ್ಲಿ ಉತ್ತರ ಭಾರತದಲ್ಲಿ ನಡೆದ ಚೋಟಿ ಕಟ್ವಾ ಘಟನೆಯನ್ನು ನೆನಪಿಸುತ್ತಿದೆ. ಹರಿಯಾಣ, ದೆಹಲಿ ಹಾಗೂ ರಾಜಸ್ಥಾನದಲ್ಲಿ ಇದೇ ರೀತಿ ಮಹಿಳೆಯ ಕೂದಲನ್ನು ಕತ್ತರಿಸಿ ಹುಡುಗರು ಓಡಿ ಹೋಗುತ್ತಿದ್ದ ಘಟನೆ ನಡೆದಿತ್ತು.
ಜನವರಿ 6 ರಂದು ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ಮಹಿಳೆಯರ ವಿಶೇಷ ರೈಲಿನಲ್ಲಿ ದಾದಾರ್ ಸ್ಟೇಷನ್ಗೆ ಬಂದು ಇಳಿದಿದ್ದಾರೆ. ದಾದರ ಪಶ್ಚಿಮದಲ್ಲಿರುವ ತನ್ನ ಕಾಲೇಜಿಗೆ ಹೋಗುವ ವೇಳೆ, ಆಕೆಯ ತಲೆಯ ಹತ್ತಿರ ಯಾವುದೋ ಹರಿತವಾದ ವಸ್ತು ಸುಳಿದಂತೆ ಭಾಸವಾಗಿದೆ. ತಿರುಗಿ ನೋಡಿದ ಕ್ಷಣದಲ್ಲಿಯೇ ಒಬ್ಬ ವ್ಯಕ್ತಿ ತನ್ನ ಬ್ಯಾಗ್ ಜೊತೆ ಓಡಿ ಹೋಗುತ್ತಿರುವುದು ಕಂಡಿದೆ. ಕೆಳಗೆ ನೋಡದಾಗಿ ವಿದ್ಯಾರ್ಥಿನಿಯ ತಲೆಗೂದಲು ಕತ್ತರಿಸಿ ಬಿದ್ದಿರುವು ತಿಳಿದ ಬಂದಿದೆ.
ತಿರುಗಿ ನೋಡಿದಾಗಲೇ ಹುಡುಗಿಗೆ ತನ್ನ ತಲೆಗೂದಲನ್ನು ಯಾರೋ ಕಟ್ ಮಾಡಿದ್ದಾರೆ ಎಂಬುದು ಅರಿವಿಗೆ ಬಂದಿದೆ. ಗಾಬರಿಯಾದ ಯುವತಿ ಕೂದಲು ಕತ್ತರಿಸಿದ ಯುವಕನನ್ನು ಬೆನ್ನಟ್ಟಿದ್ದಾಳೆ. ಆದ್ರೆ ಜನಜಂಗುಳಿಯಲ್ಲಿ ಯುವಕ ಕಳೆದು ಹೋಗಿದ್ದನೆ. ನಂತರ ಯುವತಿ ಮುಂಬೈನ್ ಸೆಂಟ್ರಲ್ ರೈಲ್ವೆ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಈಗಾಗಲೇ ಹೇಳಿದಂತೆ ಈ ಒಂದು ಘಟನೆ ಉತ್ತರಭಾರತದಲ್ಲಿ 2017ರಲ್ಲಿ ನಡೆದ ಚೋಟಿ ಕಟ್ವಾ ಘಟನೆಯನ್ನು ನೆನಪಿಸುತ್ತಿದೆ. ಹೀಗೆಯೇ ಕಿಡಿಗೇಡಿಗಳ ಗುಂಪು ಹೆಣ್ಣು ಮಕ್ಕಳ ಕೂದಲು ಕತ್ತರಿಸಿ ಎಸ್ಕೇಪ್ ಆಗತ್ತಿದ್ದ ಘಟನೆಯಿಂದ ರೋಸಿಹೋಗಿದ್ದ ಮಹಿಳೆಯರು ತಮ್ಮ ತಲೆಗೆ ಏನಾದರೂ ಭದ್ರವಾಗಿ ಕಟ್ಟಿಕೊಂಡು ಮನೆಯಿಂದ ಆಚೆ ಬರುವ ಪರಿಸ್ಥಿತಿ ಉಂಟಾಗಿತ್ತು. ಕೊನೆಗೂ ಹಾಗೆ ಕೂದಲು ಕತ್ತರಿಸುತ್ತಿದ್ದ ನೀಚರು ಯಾರು ಎಂಬುದು ನಿಗೂಢವಾಗಿಯೇ ಉಳಿದು ಹೋಯಿತು. ಸದ್ಯ ಮುಂಬೈನಲ್ಲಿ ನಡೆದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು. ಕೂಡಲೇ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ದಾರೆ.

























