ಪುತ್ತೂರು : ಕಳೆದ 7 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಮರಿಕೆ ಸಾವಯವ ಮಳಿಗೆಯು ಜ.14ರ ಮಕರ ಸಂಕ್ರಮಣದ ಶುಭ ದಿನದಂದು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಎದುರಿನಲ್ಲಿರುವ ‘ತ್ರಿನೇತ್ರ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.
ಶ್ಯಾಮ ಜ್ಯುವೆಲ್ಸ್ ಗ್ರೂಪ್ನ ಚೇರ್ಮೆನ್ ಆಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಶ್ಯಾಮ ಜ್ಯುವೆಲ್ಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪುತ್ತೂರು ಶಾರದಾ ನೇತ್ರಾಲಯದ ಶ್ರೀದೇವಿ ಕಾನಾವು ಹಾಲುಕ್ಕಿಸುವ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಗ್ರಾಮರಾಜ್ಯ ಟ್ರಸ್ಟ್ ಸಂಯೋಜಕ ಕೃಷ್ಣಪ್ರಸಾದ್ ಅಮ್ಮಂಕಲ್ಲು, ಎಸ್ ಡಿ ಪಿ ರೆಮೆಡೀಸ್ನ ರೂಪಾಲೇಖ, ವಿಮಾ ಸಲಹೆಗಾರ ಶಿವಸುಬ್ರಹ್ಮಣ್ಯ ಸೇರಿದಂತೆ ಅನೇಕ ಗಣ್ಯರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಪ್ರವರ್ತಕರಾಗಿರುವ ಮಾನಸ ವೈ ಮತ್ತು ಸುಹಾಸ್ ಮರಿಕೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























