38 ವರ್ಷಗಳ ಇತಿಹಾಸ, ಪರಂಪರೆ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವ ಟೋಪ್ಕೋ ಸಮೂಹ ಸಂಸ್ಥೆಗಳ ಟೋಪ್ಕೋ ಜ್ಯುವೆಲ್ಲರಿ ವಿಟ್ಲದಲ್ಲಿ ಪ್ರಾರಂಭವಾಗಿ 12 ವರ್ಷಗಳು ಕಳೆದಿದ್ದು, ಇದರ ನವೀಕೃತ ಮಳಿಗೆಯು ಜನವರಿ 22 ಬುಧವಾರ ಬೆಳಿಗ್ಗೆ 10 ಗಂಟೆಗೆ ವಿಟ್ಲದ ಪುತ್ತೂರು ರಸ್ತೆಯ ಎಂಪಾಯರ್ ಮಾಲ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪಾಲುದಾರರಾದ ಮಹಮ್ಮದ್ ಟಿ.ಕೆ. ತಿಳಿಸಿದ್ದಾರೆ.
ಕುಂಬೋಲ್ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಿಟ್ಲ ಚರ್ಚ್ ನ ರೆವರೆಂಡ್ ಫಾದರ್ ಐವನ್ ಮೈಕಲ್ ರಾಡ್ರಿಗಸ್ ಹಾಗೂ ಪ್ರಮುಖರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಟೋಪ್ಕೋ ಜ್ಯುವೆಲ್ಲರಿಯು ಕರ್ನಾಟಕ ಮತ್ತು ಕೇರಳದಲ್ಲಿ ಒಟ್ಟು 13 ಮಳಿಗೆಗಳನ್ನು ಒಳಗೊಂಡಿದ್ದು, ಗ್ರಾಹಕರಲ್ಲಿ 38 ವರ್ಷದ ನಂಬಿಕೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. 2012 ಏಪ್ರಿಲ್ 30 ರಂದು ವಿಟ್ಲದಲ್ಲಿ ಹಾಗೂ ನಂತರ ಪುತ್ತೂರು ಕೋರ್ಟ್ ರಸ್ತೆಯಲ್ಲಿ ಟೋಪ್ಕೋ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದೆ. ಟೋಪ್ಕೋ ಸಮೂಹ ಸಂಸ್ಥೆಯು ಚಿನ್ನಾಭರಣ, ಬೆಳ್ಳಿ, ಡೈಮಂಡ್ ಆಭರಣ ಹಾಗೂ ವಾಚುಗಳ ವ್ಯವಹಾರದ ಜೊತೆಗೆ ವಸತಿ ಸಮುಚ್ಛಯ, ಕಾಮಗಾರಿ, ಆರೋಗ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದೆ.
ಆಫರ್ & ಗಿಫ್ಟ್ಸ್: ನವೀಕರಣಗೊಂಡು ಉದ್ಘಾಟನೆಯ ಪ್ರಯುಕ್ತ ವಿವಿಧ ತರಹದ ಡಿಸೈನ್ಸ್, ಅಧಿಕ ಕಲೆಕ್ಷನ್ಸ್, ಅಪೂರ್ವ ವಿನ್ಯಾಸಗಳು, ಉದ್ಘಾಟನೆಯಲ್ಲಿ ಭಾಗವಹಿಸಿದ 200 ಮಂದಿ ಸಾರ್ವಜನಿಕರಿಗೆ ಉಚಿತ ಉಡುಗೊರೆಗಳು ಮತ್ತು ಬೆಳ್ಳಿ ನಾಣ್ಯಗಳು, ಉದ್ಘಾಟನೆ ದಿನದಿಂದ ಫೆಬ್ರವರಿ 1 ರ ತನಕ ಗ್ರಾಹಕರಿಗೆ ಶೇಕಡಾ 5 ಮೇಕಿಂಗ್ ಚಾರ್ಜ್, ಡೈಮಂಡ್ ಮತ್ತು ಬೆಳ್ಳಿ ಆಭರಣಗಳ ಮೇಲೆ ಶೇಕಡಾ 10 ರಿಯಾಯಿತಿ ಹಾಗೂ ಉದ್ಘಾಟನೆಯಂದು ಲಕ್ಕಿ ಗ್ರಾಹಕರಿಗೆ ಉಚಿತ ಡೈಮಂಡ್ ರಿಂಗ್ ಪಡೆಯುವ ಅವಕಾಶವಿದೆ.
ವಿಶೇಷ ಆಕರ್ಷಣೆ: ಪ್ರಸ್ತುತ ಸಮಾಜದಲ್ಲಿ ನಕಲಿ ದಲ್ಲಾಳಿಗಳ ಹಾವಳಿಯಿಂದ ಕಲಬೆರೆಕೆ ಚಿನ್ನಾಭರಣದ ಮಾರಾಟ ಮತ್ತು ಖರೀದಿ ವ್ಯಾಪಕವಾಗಿದ್ದು, ಜನರು ಮೋಸದ ಬಲೆಗೆ ಸಿಗಬಾರದು. ಕೇಂದ್ರ ಸರಕಾದ HUID ಸಂಸ್ಥೆಯ BIS ಪ್ರಮಾಣೀಕೃತ ಮಳಿಗೆಯಿಂದ ಚಿನ್ನಾಭರಣಗಳ ವ್ಯವಹಾರ ನಡೆಸುವ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು. ಆ ಪ್ರಯುಕ್ತ ಉದ್ಘಾಟನೆಯ ಸಂದರ್ಭ ಸಾರ್ವಜನಿಕರಿಗೆ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರರಾದ ಕುದ್ರೋಳಿ ಗಣೇಶ್ ಅವರಿಂದ “ಅಬ್ರಕಡಬ್ರ” ಮಾಯಾಲೋಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮಹಮ್ಮದ್ ಟಿ.ಕೆ. ಮಾಹಿತಿ ನೀಡಿದರು.