ಪುತ್ತೂರು: ಖಾಸಗಿ ಶಾಲಾ ವಾಹನ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.
ಘಟನೆ ಪರಿಣಾಮ ಕಾರಿನ್ ಮುಂಭಾಗ ಜಖಂ ಗೊಂಡಿದ್ದು ಏರ್ ಬ್ಯಾಗ್ ತೆರೆದುಕೊಂಡಿದೆ.ಕಾರ್ ನಲ್ಲಿದ್ದ ಓರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ವೇಳೆ ಹಿಂಬದಿ ಇದ್ದ ಪಿಕಪ್ ವಾಹನಕ್ಕೆ ಇನ್ನೋವಾ ಕಾರು ಕೂಡ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.