ಕಡಬ ತಾಲೂಕು ನೂತನ ಕೃಷಿಕ ಸಮಾಜದ ಸಭೆ ಫೆಬ್ರವರಿ 12 ಬುಧವಾರದಂದು ಕಡಬ ರೈತ ಸಂಪರ್ಕ ಕೇಂದ್ರದಲ್ಲಿ ರಾಕೇಶ್ ರೈ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷ ವಿಜಯಕುಮಾರ್ ರೈ ಕೊರಂಗ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ರೈತರು ಹಾಗೂ ಸರಕಾರದ ಮಧ್ಯೆ ಕೃಷಿಕ ಸಮಾಜಗಳು ಕೊಂಡಿಯಾಗಿ ಕೆಲಸ ಮಾಡಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮುಂದೆ ಇದೆ ಎಂದು ನುಡಿದ ಅವರು ನೂತನ ಕಡಬ ಕೃಷಿಕ ಸಮಾಜಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯೊಂದಿಗೆ ಶುಭ ಹಾರೈಸಿದರು.

ಸಹಾಯಕ ಕೃಷಿ ನಿರ್ದೇಶಕರಾದ ಯಶಸ್ ಮಂಜುನಾಥ ಅವರು ಕೃಷಿಕ ಸಮಾಜದ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಕಡಬ ತಾಲೂಕು ಪಶುವೈದ್ಯಾಧಿಕಾರಿ ಡಾಕ್ಟರ್ ಅಜಿತ್ , ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಯಶೋದರ ಅವರು ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕೆ ಆರ್ ಸುಕುಮಾರ್, ಜಿಲ್ಲಾ ಪ್ರತಿನಿಧಿ ಮಹೇಶ್ ಕೆ ಸವಣೂರು ಉಪಸ್ಥಿತರಿದ್ದರು.

ನೂತನ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಶಿರಾಡಿ, ಖಜಾಂಚಿ ಜಯರಾಮ್ ಭಟ್, ಸದಸ್ಯರಾದ ಡಾ. ಸುರೇಶ್ ಕುಮಾರ್ ಕುಡೂರು, ಉದಯ ರೈ ಮಾದೋಡಿ, ತಾರಾನಾಥ ಕಾಯರ್ಗ , ಇ ಎಸ್ ವಾಸುದೇವ ಇಡ್ಯಾಡಿ, ಬಾಳಪ್ಪ ಪೂಜಾರಿ ದೋಳ, ಸೋಮನಾಥ ಕನ್ಯಾಮಂಗಲ, ಶೀನಪ್ಪ ಶೆಟ್ಟಿ ನಕ್ರಾಜೆ, ಪ್ರಕಾಶ್ ಪಟ್ಟೆ ಬಲ್ಯ ಇವರುಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಡಬ ತಾಲೂಕು ಕೃಷಿ ಅಧಿಕಾರಿ ಟಿ ಎಸ್ ಭರಮಣ್ಣನವರ್ ಸ್ವಾಗತಿಸಿ ವಂದಿಸಿದರು, ಕಚೇರಿ ಸಹಾಯಕಿ ಶ್ರೀಮತಿ ಗೀತಾ ರವರು ಸಹಕರಿಸಿದರು