ಸಮಾರಂಭ ಆರಂಭದ ದೊಡ್ಡ ತಲೆನೋವೇ ಊಟ – ತಿಂಡಿಯ ಏರ್ಪಾಟು. ನಂತರ ಎಲ್ಲಿ? ಯಾವಾಗ? ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಎದುರಾಗುತ್ತದೆ. ಅತಿಥಿಗಳ ಸಂಖ್ಯೆಯೆಷ್ಟು ಎಂಬಲ್ಲಿಂದ ಹಿಡಿದು ಏನೆಲ್ಲಾ ತಿನಿಸು ತಯಾರಿಸುವುದು ಎಂಬಲ್ಲಿವರೆಗೆ ನಾನಾ ರೀತಿಯ ಪ್ರಶ್ನೆಗಳು, ಗೊಂದಲಗಳು. ಇದನ್ನು ಸುಲಭವಾಗಿ ನಿರ್ವಹಿಸುವುದು ಹೇಗೆ?
ಇನ್ನು ನೀವು ಚಿಂತಿಸುವ ಅಗತ್ಯವಿಲ್ಲ. ಸ್ಫೂರ್ತಿ ಕ್ಯಾಟರಿಂಗ್ ಸರ್ವಿಸಸ್ ಮತ್ತು ಈವೆಂಟ್ ಆರ್ಗನೈಸರ್ಸ್ ನಿಮ್ಮೆಲ್ಲಾ ಚಿಂತೆಗಳನ್ನು ದೂರ ಮಾಡಲಿದೆ.
ಒಂದು ಫೋನ್ ಕರೆ ಮಾಡಿ, ನಿಮ್ಮ ಕಾರ್ಯಕ್ರಮದ ವಿವರ ನೀಡಿ. ಮಿಕ್ಕೆಲ್ಲಾ ಜವಾಬ್ದಾರಿಗಳನ್ನು ಸ್ಫೂರ್ತಿ ಕ್ಯಾಟಿರಿಂಗ್ ನಿಭಾಯಿಸಲಿದೆ. ನಿಮ್ಮ ಕಾರ್ಯಕ್ರಮ ಯಶಸ್ವಿ ಆಗಿ ನಡೆಯುತ್ತದೆ ಎಂಬ ವಿಶ್ವಾಸ ನಿಮಗಿದ್ದರೆ ಸಾಕು.
ಸ್ವಚ್ಛ ಅಡುಗೆಯಿಂದ ಹಿಡಿದು, ಶುಭ ಸಮಾರಂಭ ನಿರ್ವಹಣೆವರೆಗೆ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಹೊಣೆಯನ್ನು ಸ್ಫೂರ್ತಿ ಕ್ಯಾಟರಿಂಗ್ ಸರ್ವಿಸಸ್ ಮತ್ತು ಈವೆಂಟ್ ಆರ್ಗನೈಸರ್ಸ್ ವಹಿಸಿಕೊಳ್ಳಲಿದೆ.

ಸಸ್ಯಾಹಾರಿ ಮತ್ತು ಮಾಂಸಹಾರಿ ಎರಡೂ ವಿಭಾಗದಲ್ಲೂ ಪ್ರತ್ಯೇಕ ಸೇವೆ ನೀಡುವುದೇ ಸ್ಫೂರ್ತಿ ಕ್ಯಾಟರಿಂಗಿನ ವೈಶಿಷ್ಟ್ಯ. ಇದರೊಂದಿಗೆ ವೇದಿಕೆ ಅಲಂಕಾರ ವಿನ್ಯಾಸ, ಸಭಾಂಗಣ ವಿನ್ಯಾಸ, ಓಪನ್ ಗ್ರೌಂಡ್ ಸೆಟಪ್, ಶಾಮಿಯಾನ ಮತ್ತು ಜನರೇಟರ್ ಸೇವೆಗಳು, ಡಿಜೆ ಸೌಂಡ್ಸ್ ಮತ್ತು ಲೈಟಿಂಗ್ಸ್, ಮದುವೆ ಹಾರಗಳು, ಛಾಯಾಗ್ರಹಣ, ವೀಡಿಯೊ ಮತ್ತು ಡ್ರೋನ್ ಸೇವೆಗಳು, ರಸಮಂಜರಿ, ವಾದ್ಯ ಮತ್ತು ಕೊಂಬು, ಕೇರಳ ಚೆಂಡೆ ಮತ್ತು ನಿರೂಪಣೆ ಹೀಗೆ ಒಂದು ಸಮಾರಂಭಕ್ಕೆ ಏನೆನೆಲ್ಲಾ ವ್ಯವಸ್ಥೆಗಳು ಬೇಕೋ ಅವೆಲ್ಲವೂ ಸ್ಫೂರ್ತಿ ನಿಭಾಯಿಸಲಿದೆ.
ಹಾಗೆಂದು ಮದುವೆ ಸಮಾರಂಭ ಮಾತ್ರವಲ್ಲ ಮೆಹಂದಿ ಮತ್ತು ನಿಶ್ಚಿತಾರ್ಥ, ಸೀಮಂತ, ನಾಮಕರಣ, ಹುಟ್ಟುಹಬ್ಬ ಸಮಾರಂಭ, ವಿವಾಹ ವಾರ್ಷಿಕೋತ್ಸವ, ಕಛೇರಿ ಕಾರ್ಯಕ್ರಮಗಳು, ಕುಟುಂಬ ಸಮ್ಮಿಲನ ಮೊದಲಾದ ಸಮಾರಂಭಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಲಿದೆ.
ಆಹಾರೋದ್ಯಮ ಕ್ಷೇತ್ರ ತೀರಾ ಭಿನ್ನ. ಕೌಶಲವೇ ಇಲ್ಲಿನ ಆಸ್ತಿ. ಸಮಾರಂಭದ ರುಚಿಕರ ಆಹಾರ ಮರೆಯಲಾಗದ ಅನುಭವ ನೀಡುತ್ತದೆ. ಇಂತಹ ಪರಿಣತಿಯನ್ನು ಹೊಂದಿರುವುದೇ ಸ್ಫೂರ್ತಿಯ ವಿಶೇಷತೆ. ಕಾರ್ಯಕ್ರಮ ಪರಿಪೂರ್ಣ ನಿರ್ವಹಿಸುವ ಖಾತ್ರಿಯೊಂದಿಗೆ ಕಾರ್ಯಕ್ರಮ ಸ್ಮರಣೀಯವಾಗಿಸುವುದು ಗ್ಯಾರೆಂಟಿ.
ಸಂಪರ್ಕಿಸಿ 9591877560, 8861325334