ಮಂಗಳೂರು: ಮಂಗಳಾದೇವಿ ದೇವಸ್ಥಾನದ ರಸ್ತೆಯ ನಾಮಫಲಕ ಅನಾವರಣ ಕಾರ್ಯಕ್ರಮ ನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ನಡೆಯಿತು.
ಸಂಸದ ಬ್ರಿಜೇಶ್ ಚೌಟ ಅವರು ನಾಮಫಲಕವನ್ನುಅನಾವರಣಗೊಳಿಸಿದರು.
ಪಾಂಡೇಶ್ವರ, ಸುಭಾಶ್‌ನಗರ, ಮಂಕಿಸ್ಟ್ಯಾಂಡ್, ಮಂಗಳಾದೇವಿ ದೇಗುಲದಿಂದ ರಥಬೀದಿಯಾಗಿ ಮೊದಲ ಸೇತುವೆಯವರೆಗೆ ದೊಡ್ಡದಾದ 2ರಿಂದ 3 ಕಿಲೋ ಮೀಟರ್ ಉದ್ದದ ರಸ್ತೆಗೆ ಶ್ರೀ ಮಂಗಳಾದೇವಿ ದೇಗುಲ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಸರಕಾರದ ಅನುಮೋದನೆ ಬಳಿಕ ಈ ರಸ್ತೆಯನ್ನು ಮಂಗಳಾದೇವಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಶಾಸಕ ವೇದವವ್ಯಾಸ ಕಾಮತ್, ಮಾಜಿ ಕಾರ್ಪೋರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಮನೋಜ್ ಕುಮಾರ್, ದಿವಾಕರ ಪಾಂಡೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.