ಹುಬ್ಬಳ್ಳಿ: ಯುವಕನೋರ್ವ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ ಹಿನ್ನೆಲೆಯಲ್ಲಿ ಯುವತಿಯೋರ್ವಳ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನನ್ನೇ ಪ್ರೀತಿಸಬೇಕು, ನನ್ನನ್ನೇ ಮದುವೆಯಾಗಬೇಕೆಂದು ಸಿರಾಜ್ ಯುವತಿ ವಿದ್ಯಾಳಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ ಹಲ್ಲೆ ಸಹ ಮಾಡಿದ್ದಾನೆ ಇದರಿಂದ ಮನನೊಂದ ವಿದ್ಯಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಆಗ ಕೂಡಲೇ ಕುಟುಂಬಸ್ಥರು ವಿದ್ಯಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಯುವತಿಗೆ ಕಿರುಕುಳ ನೀಡುತ್ತಿದ್ದ ಸಿರಾಜ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು. ಇನ್ನು ಇದೇ ವೇಳೆ ಯುವತಿಯ ಕುಟುಂಬಸ್ಥರಿಂದ ಪ್ರಕರಣದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಮಿಷನರ್ ಎನ್.ಶಶಿಕುಮಾರ್, ಮದುವೆಯಾಗುವಂತೆ ಪೀಡಿಸುತ್ತಿದ್ದ, ಅದಲ್ಲದೆ ಹಲ್ಲೆ ಮಾಡಿದ್ದ. ಹೀಗಾಗಿ ಕಿರುಕುಳ ನೀಡಿದ್ದ ಯುವಕ ಸಿರಾಜ್ ನನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಯುವತಿ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದರು.
ಯುವಕ- ಯುವತಿ ಇಬ್ಬರು ಕುಂದಗೋಳ ಮೂಲದವರು. ಮಾರ್ಚ್ 31ರಂದು ಸಿರಾಜ್ ಯುವತಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಅದಲ್ಲದೆ ಹಲ್ಲೆ ಸಹ ಮಾಡಿದ್ದ. ಹಾಗೇ ವಿದ್ಯಾ ಫೊಟೋ ಇಟ್ಟುಕೊಂಡು ಕಿರುಕುಳ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇದೀಗ ಟಾರ್ಚರ್ ಕೊಟ್ಟ ಯುವಕನನ್ನ ಬಂಧನ ಮಾಡಲಾಗಿದ್ದು, ಯುವತಿಗೆ ಯಾವ ತೊಂದರೆ ಇಲ್ಲ ತಿಳಿಸಿದರು.