ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಇದರ 2025-26ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಲಯನ್ಸ್ ಕ್ಲಬ್ ಮಂಗಳೂರಿನ ಕುಡುಪಿ ಅರವಿಂದ್ ಶೆಣೈ ಆಯ್ಕೆ ಆಗಿದ್ದಾರೆ.
ಇತ್ತೀಚೆಗೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಅವರು ಸರ್ವಾನುಮತದಿಂದ ಗವರ್ನರ್ ಆಗಿ ಚುನಾಯಿತರಾದರು.
ದಕ್ಷಿಣ ಕನ್ನಡ , ಹಾಸನ, ಚಿಕ್ಕಮಗಳೂರು, ಕೊಡಗು ಈ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ 120 ಕ್ಲಬ್ ಗಳಲ್ಲಿ ಸುಮಾರು 4500 ಲಯನ್ಸ್ ಸದಸ್ಯರು ಇದ್ದು ನಿತ್ಯ ನಿರಂತರ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಇದೇ ಜುಲೈ ತಿಂಗಳಲ್ಲಿ ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯುವ ಲಯನ್ಸ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅರವಿಂದ್ ಶೆಣೈ ಅವರು ಜಗತ್ತಿನ ಇತರ 700 ಗವರ್ನರ್ ಗಳ ಜೊತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.