ಬಡಗನ್ನೂರು : ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ, ಪ್ರತಿಭಾ ಪ್ರೌಢ ಶಾಲೆ ಪಟ್ಟೆ, ಹಾಗೂ ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ಆಶ್ರಯದಲ್ಲಿ 5 ರಿಂದ 10 ನೇ ತರಗತಿ ಮಕ್ಕಳಿಗೆ ” ಆಕಾಶಕ್ಕೆ ಏಣಿ’ ” ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮ ಏಪ್ರಿಲ್ 8 ರಂದು ಪಟ್ಟೆ ಶಾಲಾ ಆವರಣದಲ್ಲಿ ನಡೆಯಿತು.

ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಪ್ರಾಸ್ತಾವಿಕ ಮಾತನಾಡಿ ಮಕ್ಕಳು ತಮ್ಮ ಎರಡು ತಿಂಗಳ ರಜಾ ಸಮಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಪಾಯ ದೊರಕಿಸುವ ನಿಟ್ಟಿನಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಮಕ್ಕಳಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಏರೋಬಿಕ್ಸ್, ಚಿತ್ರಕಲೆ, ಕ್ರಾಫ್ಟ್, ವೇದಗಣಿತ, ಮನರಂಜನಾ ಆಟಗಳು, ಸಂಗೀತ ಹಾಗೂ ನೃತ್ಯ ಇತ್ಯಾದಿ ವಿಷಯಗಳಿಗೆ ಪ್ರತ್ಯೇಕ ನುರಿತ ತಜ್ಞರಿಂದ ತರಬೇತಿ ನೀಡಿ ವ್ಯಕ್ತಿತ್ವ ವಿಕಾಸನ ಪಡಿಸುವ ದೃಷ್ಟಿಯಲ್ಲಿ ಪ್ರಪ್ರಥಮ ಬಾರಿಗೆ ಕಾರ್ಯಕ್ರಮ ಅಯೋಜನೆ ಮಾಡಿಲಾಗಿದೆ ಇದರ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ. ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಪ್ರಕಟಪಡಿಸಿದಾಗ ಮಕ್ಕಳ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ. ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳು ದೇಶದ ಸಂಪತ್ತು ಅನ್ನುವ ದೃಷ್ಟಿಯಲ್ಲಿ ಕಲಿಕೆಗೆ ಫೂರಕವಾಗಿ “ಆಕಾಶಕ್ಕೆ ಏಣಿ” ಬೇಸಿಗೆ ಶಿಬಿರವನ್ನು ಅಯೋಜನೆ ಬಗ್ಗೆ ಸಂತೋಷಗೊಂಡು ಅವರು ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ರವರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿದ್ದ ಬಡಗನ್ನೂರು ಗ್ರಾ. ಪಂ. ಸದಸ್ಯರಾದ ದಮಯಂತಿ ಕೆಮನಡ್ಕ, ಹಾಗೂ ಲಿಂಗಪ್ಪ ಗೌಡ ಮೋಡಿಕೆ ಮಾತನಾಡಿ ಶುಭ ಹಾರೖೆಸಿದರು.

ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲ ಕ್ಲಷ್ಣ ಭಟ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಇತ್ತೀಚಿನ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲಾ ಭಾಗಗಳಲ್ಲಿ ಬೇಸಿಗೆ ಶಿಬಿರ ನಡೆಯುತ್ತಿದೆ. ಆದರೆ ನಮ್ಮಲ್ಲಿ ಒಂದು ವಿಭಿನ್ನ ರೀತಿಯಲ್ಲಿ 3 ದಿವಸಗಳ ಕಾಲ ಅಯೋಜಿಸಲಾಗಿದೆ. ಅನಂತ ಗುರಿಯನ್ನು ಇಟ್ಟುಕೊಂಡು ನಡೆಯುವುದೇ ಆಕಾಶಕ್ಕೆ ಏಣಿ ಆಗಿದೆ. ಎಲ್ಲರೂ ಈ ಶಿಬಿರದ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉತ್ತಮ ರೀತಿಯಲ್ಲಿ ಗುರಿ ಸಾಧಿಸುವಂತಾಗಲಿ ಎಂದು ಹೇಳಿ ಶುಭ ಹಾರೖೆಸಿದರು.
ವೇದಿಕೆಯಲ್ಲಿ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ ಹಾಗೂ ಶ್ರೀ ಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಉಪಸ್ಥಿತರಿದ್ದರು.
ಪ್ರೌಢ ಶಾಲಾ ಗಣಿತ ಶಿಕ್ಷಕಿ ಪ್ರೀತಿ
ಕುಮಾರಿ ಸ್ವಾಗತಿಸಿ, ಹಿಂದಿ ಶಿಕ್ಷಕಿ ವಂದಿಸಿದರು. ಸಹ ಶಿಕ್ಷಕಿ ಭವಿತಾ ಕಾರ್ಯಕ್ರಮ ನಿರೂಪಿಸಿದರು. ಉಭಯ ಶಿಕ್ಷಣ ಸಂಸ್ಥೆಯ ಶಿಕ್ಷಕ ವೖಂದದವರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯೋಗ ಶಿಕ್ಷಕಿ ಶ್ರೀಮತಿ ಅಖಿಲ ರವರಿಂದ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.