ವಿಟ್ಲ: ಉದ್ಯಮಿಯೋರ್ವರು ಹೃದಯಗಾತದಿಂದ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ.
ವಿಶಾಲ್ ಕ್ರೀಮ್ ಪಾರ್ಲರ್ ಮತ್ತು ಸಿಕ್ವೆರಾ ಮೆಟಲ್ ಮಾರ್ಟ್ ನ ಮಾಲಕ ಸಿ ಎಫ್ ಸಿಕ್ವೆರಾ (60) ಮೃತಪಟ್ಟ ವ್ಯಕ್ತಿ .
ಕೆಲ ದಿನಗಳ ಹಿಂದೆ ತೀವ್ರ ಹೃದಯಾಘತಕ್ಕೆ ಒಳಪಟ್ಟು ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ವಿಶಾಲ್ ಸಿಕ್ವೆರಾ ಮತ್ತು ಉಜ್ವಲ್ ಸಿಕ್ವೆರಾ, ಸಹೋದರರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.