ಎಂಟು ದಶಕಗಳ ಇತಿಹಾಸ ಮತ್ತು ಪರಂಪರೆಯ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಪುತ್ತೂರಿನಲ್ಲಿ ತನ್ನ ನವೀಕೃತ ವಿಶಾಲವಾದ ಶೋರೂಮ್ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.
ಈ ಶೋರೂಮ್ ನಾಲ್ಕು ಅಂತಸ್ತಿನ ಮಹಡಿಯಾಗಿದ್ದು ಮತ್ತಷ್ಟು ವಿವಿಧ ವಿನ್ಯಾಸಗಳ ಆಭರಣಗಳ ಸಂಗ್ರಹದೊಂದಿಗೆ ಗ್ರಾಹಕರ ಸೇವೆಗಾಗಿ ಸಿದ್ಧವಾಗಿದೆ.

ಇದೇ ಏಪ್ರಿಲ್ 20 ರಂದು ಉದ್ಘಾಟನೆ ಗೊಳ್ಳಲಿರುವ ನಿಟ್ಟಿನಲ್ಲಿ ಆಮಂತ್ರಣ ಪತ್ರ ವನ್ನು ಇಂದು ಮುಳಿಯ ಸಂಸ್ಥೆಯ ಹಿರಿಯ ದಿಗ್ದರ್ಶಕರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಇವರು ಬಿಡುಗಡೆಗೊಳಿಸಿದರು, ಸಂಸ್ಥೆಯ ನಿರ್ದೇಶಕಿಯರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ ಹಾಗೂ ಸಂಸ್ಥೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.