ಪುತ್ತೂರಿನಿಂದ ಮಡಿಕೇರಿ ಮಾರ್ಗವಾಗಿ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಾರೊಂದು ಮಡಿಕೇರಿ ಹೊರವಲಯದ ಇಬ್ನಿ ರೆಸಾಟ್೯ ಬಳಿ ಆಕಸ್ಮಿಕವಾಗಿ ಬೆಂಕಿ ಹತ್ತಿದ ಹಿನ್ನಲೆ ಧಗಧಗನೆ ಉರಿದು ಹೋಗಿದೆ. ಕಾರ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ರಸ್ತೆ ಮಧ್ಯೆ ಕಾರ್ ಬೆಂಕಿಯಿಂದ ಸುಟ್ಟು ಹೋದ ಘಟನೆಯಿಂದಾಗಿ ಕೆಲಕಾಲ ಮಡಿಕೇರಿ- ಕುಶಾಲನಗರದ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ವ್ಯತ್ಯಯವಾಯಿತು.