ವಿಟ್ಲ:ಅನಾರೋಗ್ಯದ ಹಿನ್ನಲೆ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಮೃತರನ್ನು ರಮೇಶ್(45) ಎಂದು ಗುರುತಿಸಲಾಗಿದೆ.
ರಮೇಶ್ ರವರು ಉತ್ತಮ ಕ್ರೀಡಾ ಸಂಘಟಕ ಹಾಗೂ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದರು ಹಿಂದೂ ಹಿತರಕ್ಷಣಾ ಸಮಿತಿಯ ಸಂಘಟಕ
ಸಾರ್ವಜನಿಕ ಶ್ರೀ ಗಣೇಶೋತ್ಸವವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ವನ್ನು ಸಾಲೆತ್ತೂರಿನಲ್ಲಿ ಆಚರಿಸಲು ಶ್ರಮ ಪಟ್ಟಿದ್ದರು.
ಮೃತರು ಪತ್ನಿ, ಪುತ್ರಿ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.