ಬಂಟ್ವಾಳ: ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಯಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ₹402 ಕೋಟಿ ಮೊತ್ತದ ಅನುದಾನ ಅರ್ಹ ಫಲಾನುಭವಿಗಳಿಗೆ ತಲುಪಿದೆ. ಏಪ್ರಿಲ್ 22ರಂದು ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಬಿ.ಸಿ.ರೋಡು ಸ್ಪರ್ಷ ಸಭಾಂಗಣದಲ್ಲಿ ‘ಗ್ಯಾರಂಟಿ ಸಂಭ್ರಮೋತ್ಸವ’ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ತಿಳಿಸಿದರು.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಂದು
ಬೆಳಿಗ್ಗೆ ಬಿಸಿ ರೋಡ್ ಮುಖ್ಯ ವೃತ್ತದ ಬಳಿ ನಡೆಯುವ
ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಫಲಾನುಭವಿಗಳು ಭಾಗವಹಿಸುವರು ಎಂದರು.
ಮುಖ್ಯ ವೃತ್ತದ ಬಳಿ ಕೆ.ಎಸ್.ಆರ್.ಟಿ.ಸಿ ಎಲ್ಲಾ ಚಾಲಕ ನಿರ್ವಾಹಕರ ಪರವಾಗಿ ಸಾಕೇತಿಕವಾಗಿ 4 ಚಾಲಕ ನಿರ್ವಾಹಕರಿಗೆ ಗೌರವರ್ಪಣೆ ನಡೆಯಲಿದೆ ಹಾಗೂ ಕೆ.ಎಸ್.ಆರ್.ಟಿ.ಸಿ ಪ್ರಯಾಣಿಕರಿಗೆ ಸಿಹಿ ತಿಂಡಿ ನೀಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅಬ್ದುಲ್ ಕರೀಂ ಬೊಳ್ಳಾಯಿ, ಸತೀಶ ಕುಮಾರ್, ವಿನಯ ಕುಮಾರ್, ಕೃಷ್ಣಪ್ಪ ಪೂಜಾರಿ ನಾಟಿ, ಹರ್ಷನ್ ಪೂಜಾರಿ ಇದ್ದರು.