ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ತೀರ್ಥಹಳ್ಳಿ ಹಾಗೂ ಬೀದರದಲ್ಲಿ ಜನಿವಾರ ಧರಿಸಿದ ಬ್ರಾಹ್ಮಣ ಹುಡುಗರಿಗೆ ಪ್ರವೇಶವನ್ನು ನಿರಾಕರಿಸಿದ ಘಟನೆಯನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಖಂಡಿಸಿದ್ದಾರೆ. ನಮ್ಮ ಸಂವಿಧಾನವು ಎಲ್ಲಾ ಸಮಾಜದವರಿಗೂ ಅವರದ್ದೇ ಆದ ಸಂಪ್ರದಾಯ – ಆಚರಣೆಯಲ್ಲಿ ನಡೆಯುವ ಹಕ್ಕನ್ನು ನೀಡಿದೆ ಹಾಗೂ ಯಾವುದೇ ಸಮಾಜಕ್ಕೂ ಈ ರೀತಿಯಾದ ಅಪಚಾರವಾಗಬಾರದು ಮತ್ತು ವರ್ಣಭೇದ ಮಾಡಬಾರದು ಎಂದು ಸಂದೇಶ ನೀಡಿರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.