ವಿಟ್ಲ ರಂಗರಮಜಲು ನಿವಾಸಿ ರಮೇಶ್ ಆಚಾರ್ಯ ಇಂದು ಅಲ್ಪಕಾಲದ ಅಸೌಖ್ಯದ ಕಾರಣದಿಂದ ನಿಧನರಾಗಿರುತ್ತಾರೆ.
ವಿಟ್ಲ ಹನುಮಾನ್ ಪ್ರಿಂಟರ್ಸ್ ಅಲ್ಲಿ ಸುಮಾರು 50 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ಇದರ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಇವರು
ಹವ್ಯಾಸಿ ನಾಟಕ ಕಲಾವಿದರಾಗಿ ಮತ್ತು ಉತ್ತಮ ಹಿನ್ನಲೆ ಗಾಯಕರಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಕಳೆದ ವರ್ಷ ವಯೋಸಹಜ ಹಿನ್ನೆಲೆಯಲ್ಲಿ ತನ್ನ ವೃತ್ತಿಯಿಂದ ನಿವೃತ್ತಗೊಂಡ ಇವರನ್ನು ಹನುಮಾನ್ ಪ್ರಿಂಟರ್ಸ್ ಸಂಸ್ಥೆಯು ಇವರನ್ನು ಕಾರ್ಯಕ್ರಮ ಆಯೋಜಿಸಿ ಗೌರವಿಸಿದ್ದರು.