ಕಾಣಿಯೂರು: ಮದ್ಯಸೇವಿಸಿ ಕುಮಾರಧಾರ ಹೊಳೆಬದಿಗೆ ಹೋಗಿದ್ದ ವ್ಯಕ್ತಿಯೋರ್ವರು ಹೊಳೆಬದಿ ಸಾವನ್ನಪ್ಪಿದ ಘಟನೆ ಚಾರ್ವಾಕ ಗ್ರಾಮದಲ್ಲಿ ನಡೆದಿದೆ.
ಸೋಮಶೇಖರ(40)ಮೃತಪಟ್ಟವರಾಗಿದ್ದಾರೆ. ಇವರು ಅವಿವಾಹಿತರಾಗಿದ್ದು ಚಾರ್ವಾಕ ಗ್ರಾಮದ ಅಜೇಲು ಎಂಬಲ್ಲಿ ಸಹೋದರಿ ದೇವಕಿ ಅವರ ಮನೆಯಲ್ಲಿ ವಾಸವಾಗಿದ್ದರು.
ಕೂಲಿ ಕೆಲಸ ಮಾಡಿಕೊಂಡು ವಿಪರೀತ ಅಮಲು ಸೇವಿಸುವ ಅಭ್ಯಾಸ ಹೊಂದಿದ್ದರು. ಎ.20ರಂದು ಬೆಳಿಗ್ಗೆ ಅವರು ತಂದಿರಿಸಿದ್ದ ಮದ್ಯವನ್ನು ಸೇವಿಸಿ ಮನೆಯಿಂದ ಕುಮಾರಧಾರ ಹೊಳೆ ಬದಿಗೆ ಹೋದವರು ಸಂಜೆ ತನಕವೂ ಮನೆಗೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ದೇವಕಿ, ಅವರ ಸಹೋದರ ಬಾಳಪ್ಪರವರು ಸಂಜೆ 7 ಗಂಟೆಗೆ ಕುಮಾರಧಾರ ಹೊಳೆ ಬದಿಯಲ್ಲಿ ಹುಡುಕಿದಾಗ ಹೊಳೆಯ ಬದಿಯಲ್ಲಿನ ಕಲ್ಲಿನ ಮೇಲೆ ಮಲಗಿದ ಸ್ಥಿತಿಯಲ್ಲಿ ಸೋಮಶೇಖರರವರು ಕಂಡು ಬಂದಿದ್ದರು. ಅವರನ್ನು ಆಯ್ಯಂಬುಲೆನ್ಸ್‌ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ರಾತ್ರಿ 9ಗಂಟೆಗೆ ಕರೆ ತಂದಾಗ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ದೇವಕಿ ಅವರ ಪುತ್ರ ನಾರಾಯಣ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.