ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ಸಂಜೆ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿ, ಮಾತೃಭೂಮಿ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಇಂದು (ಏಪ್ರಿಲ್ 23, 2025) ಪುತ್ತೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ.
ಪಹಲ್ಗಾಮ್ ನಲ್ಲಿ ನಡೆದ ಈ ಹೇಯ ಕೃತ್ಯದಲ್ಲಿ ಸುಮಾರು 27 ಮಂದಿ ಅಮಾಯಕ ಹಿಂದೂ ಪ್ರವಾಸಿಗರು ಮೃತಪಟ್ಟಿದ್ದಾರೆ. ಈ ಘಟನೆಯು ಕೇವಲ ದಾಳಿಯಲ್ಲ, ಇದೊಂದು ‘ಮಾರಣ ಹೋಮ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾತೃಭೂಮಿ ಸಂರಕ್ಷಣಾ ವೇದಿಕೆ, ಈ ಅಮಾನವೀಯ ಕೃತ್ಯವನ್ನು ಪ್ರತಿಯೊಬ್ಬ ಹಿಂದೂವೂ ಖಂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರೆ ನೀಡಿದೆ.

ಮಾತೃಭೂಮಿ ಸಂರಕ್ಷಣಾ ವೇದಿಕೆಯು ಈ ಪ್ರತಿಭಟನೆ ಮತ್ತು ಸಂತಾಪ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಪ್ರೇಮಿ ನಾಗರಿಕರು ಭಾಗವಹಿಸಿ, ಉಗ್ರವಾದದ ವಿರುದ್ಧ ತಮ್ಮ ದೃಢ ನಿಲುವನ್ನು ಪ್ರದರ್ಶಿಸಬೇಕು ಮತ್ತು ಅಗಲಿದ ಆತ್ಮಗಳಿಗೆ ಶಾಂತಿ ಕೋರಬೇಕೆಂದು ಮನವಿ ಮಾಡಿದೆ.