ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಬಳಿ ನಡೆದಿದೆ.
ಘಟನೆ ಪರಿಣಾಮ ಆಕ್ಟಿವಾ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಕೊಡಿಪ್ಪಾಡಿ ನಿವಾಸಿ ರಫೀಕ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ.
ಅದೇ ರಸ್ತೆಯಾಗಿ ತೆರಳುತ್ತಿದ್ದ ಉದ್ಯಮಿ ಉಜ್ವಲ್ ಪ್ರಭು ಮತ್ತು ನಿತಿನ್ತ ಪಕ್ಕಳ ರವರು ತಕ್ಷಣ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.