ಕಾವು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕೇರಳ ನೋಂದಾಯಿತ ಬುಲೆಟ್ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಎ. 29 ರಂದು ವರದಿಯಾಗಿದೆ.
ಅಪಘಾತಕ್ಕೀಡಾದ ಬೈಕ್ ಸವಾರ ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಪಾತೂರು ಸಮೀಪದ ಬದಿಮೂಲೆ ಎಂಬಲ್ಲಿ ವಾಸವಾಗಿರುವ ಮೊಯ್ದೀನ್ ಕುಂಞಿ ಎಂಬವರ ಮಗ ಅಶ್ರಫ್ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
























