ಪುತ್ತೂರು: ಬೊಳ್ವಾರಿನ ಬನ್ನೂರು ರೈತರ ಸೇವಾ ಸಂಘದ ಎದುರು ಶಿವಕೃಪಾ ಟ್ರೇಡರ್ಸ್ ಮೇ.03 ರಂದು ಶುಭಾರಂಭಗೊಳ್ಳಲಿದೆ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇದರ ಪ್ರಧಾನ ಅರ್ಚಕರು ಹಾಗು ಅನುವಂಶಿಕ ಮೊಕ್ತೇಸರರಾದ ಕೆ ಲಕ್ಷ್ಮೀನಾರಾಯಣ ಅಸ್ರಣ್ಣ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಧರೇಶ್ ಹೊಳ್ಳ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಮಳಿಗೆಯಲ್ಲಿ ಪಿಯುಸಿ, ಡಿಗ್ರಿ ಪಠ್ಯ ಪುಸ್ತಕಗಳು, ಶಾಲಾ ಬ್ಯಾಗ್, ಗೈಡ್ಸ್, ನೋಟ್ ಪುಸ್ತಕಗಳು, ಎಲ್ಲಾ ತರಗತಿಯ ಡೈಜೆಡ್ಸ್ , ಸ್ಟೇಷನರಿ, ಕೊಡೆಗಳು, ಬಂಟಿಂಗ್ಸ್, ಬಾವುಟಗಳು, ಮೊಮೆಂಟೋಸ್, ಈವೆಂಟ್ಸ್ ಐಟಮ್ಸ್, ಫೆಸ್ಟಿವಲ್ ಡೆಕೋರೇಷನ್, ಬರ್ತ್ ಡೇ ಡೆಕೋರೇಷನ್ ಐಟಮ್ಸ್ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರಲಿದೆ.