ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 8 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಸುಹಾಸ್ ಹತ್ಯೆ ದಿನವೇ ಮಂಗಳೂರಿನ ಮೂರು ಕಡೆಗಳಲ್ಲಿ ಮೂವರು ಮುಸ್ಲಿಂ ಯುವಕರ ಮೇಲೆ ಚಾಕುವಿನಿಂದ ಹಲ್ಲೆಗಳು ನಡೆದಿದ್ದವು.
ಅಡ್ಯಾರ್, ಕೊಂಚಾಡಿ ಮತ್ತು ತೊಕ್ಕೊಟ್ಟುಗಳಲ್ಲಿ ಈ ಘಟನೆಗಳು ನಡೆದಿದ್ದು, ಈ ಸಂಬಂಧ ಇಂದು ಮಂಗಳೂರು ಪೊಲೀಸರು ಏಳು ಜನರನ್ನು ಅರೆಸ್ಟ್ ಮಾಡಿದ್ದಾರೆ.
ಕಣ್ಣೂರಿನಲ್ಲಿ ನೌಷಾದ್ ಮೇಲೆ ದಾಳಿ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದ್ದರೆ, ಕೊಂಚಾಡಿ ಲುಕ್ಮನ್ಗೆ ಚಾಕು ಇರಿತ ಕೇಸ್ನಲ್ಲಿ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಣ್ಣೂರು ಎಂಬಲ್ಲಿ ನೌಷಾದ್ ಎಂಬವರಿಗೆ ಚೂರಿ ಇರಿತ ಪ್ರಕರಣದಲ್ಲಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಮುಡಿಪು ನಿವಾಸಿ ಲೋಹಿತಾಶ್ವ(32), ವೀರನಗರ ನಿವಾಸಿ ಪುನಿತ್ (28), ಕುತ್ತಾರ್ ನಿವಾಸಿ ಗಣೇಶ್ ಪ್ರಸಾದ್ (23) ಬಂಧಿತ ಆರೋಪಿಗಳು.
ಇನ್ನು ಕೊಂಚಾಡಿ ಎಂಬಲ್ಲಿ ಲುಕ್ಮನ್ ಎಂಬವರಿಗೆ ಚೂರಿ ಇರಿತ ಕೇಸ್ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಜಪೆ ನಿವಾಸಿ ಲಿಖಿತ್ (29), ಕುತ್ತಾರ್ ನಿವಾಸಿ ರಾಕೇಶ್(34), ಸುರತ್ಕಲ್ ನಿವಾಸಿ ಧನರಾಜ್ (24), ಮೂಡಬಿದ್ರೆಯ ಪ್ರಶಾಂತ್ ಶೆಟ್ಟಿ (26) ಬಂಧಿತರು