ಪುತ್ತೂರು: ಭಗತ್ ಸಿಂಗ್ ಯುವಶಕ್ತಿ ಉಪ್ಪಳಿಗೆ ಇದರ ಆಶ್ರಯದಲ್ಲಿ ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ ಶ್ರೀ ಶನೈಶ್ವರ ಪೂಜೆ ಎಳ್ಳುಗಂಟು ದೀಪಸೇವೆ ಹಾಗೂ ಧರ್ಮಸಭೆ ಮೇ.10 ರಂದು ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲ ಕ್ಷೇತ್ರ ಇರ್ದೆ ಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹ ನವೀನ್ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಕಾರ್ಯಾಲಯ ಉದ್ಘಾಟಿಸಲಿದ್ದಾರೆ.
ಯುವ ಉದ್ಯಮಿ ಸಂತೋಷ್ ರೈ ಕೈಕಾರ ಧ್ವಜ ಸ್ತಂಭ ಉದ್ಘಾಟಿಸಲಿದ್ದು ಪ್ರಕಾಶ್ ರೈ ಬೈಲಾಡಿ ಉಪಸ್ಥಿತರಿರಲಿದ್ದಾರೆ.
ಬಳಿಕ ನಡೆಯುವ ಧರ್ಮಸಭೆಯಲ್ಲಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ದ ಮಾಜಿ ಅಧ್ಯಕ್ಷರಾದ ಎಸ್ ಆರ್ ಸತೀಶ್ಚಂದ್ರ ಭಾಗವಹಿಸಲಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಸಹಸೇವಾ ಪ್ರಮುಖ್ ನ. ಸೀತಾರಾಮ ರವರು ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನೂರು ವರುಷ ಎಂಬ ವಿಷಯದ ಬಗ್ಗೆ ಬೌದ್ಧಿಕ್ ನೆರವೇರಿಸಲಿದ್ದಾರೆ.