ಪುತ್ತೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಮುಂಡೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತೆ ಹಾಗೂ ಕೊಡುಗೈ ದಾನಿ ಶ್ರೀಮತಿ ಎನ್. ಗುಲಾಬಿ ಶೆಟ್ಟಿ ಕಂಪ ಮುಂಡೂರು ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸ್ವಸ್ಥತೆಯ ಕಾರಣದಿಂದ ಇಂದು ಬೆಳಗ್ಗಿನ ಜಾವ ನಿಧನರಾದರು.
ಇವರು ದಿ. ನಾರಾಯಣ ಶೆಟ್ಟಿ ಕಂಪ ಅವರ ಧರ್ಮಪತ್ನಿ.
ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.