ಮುಂಡೂರು: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತಿದ್ದು ಸುಮಾರು ಮನೆಗಳು ಸೀಲ್ ಡೌನ್ ಆಗಿದ್ದು ಆ ಮನೆಗಳು ಹಸಿವಿನಿಂದ ಮುಕ್ತ ಆಗಬೇಕು ಮತ್ತು ಶೀಘ್ರ ಗುಣಮುಖರಾಗಿ ಬರಬೇಕು ಎಂಬ ಅಧ್ಯಕ್ಷ ರ ಆಶಯದಂತೆ ಸೀಲ್ ಡೌನ್ ಆದ ಎಲ್ಲಾ ಮನೆಗಳಿಗೂ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಪಂಚಾಯತ್ ಮೂಲಕ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕೊರೊನ ಟಾಸ್ಕ್ ಫೋರ್ಸ್ ಸದಸ್ಯರಾದ ಅಶೋಕ್ ಪುತ್ತಿಲ,ಬಾಲಕೃಷ್ಣ ಪೂಜಾರಿ, ಕೋವಿಡ್ ಸಹಾಯ ವಾಣಿ ಕೇಂದ್ರದ ಪ್ರಮುಖರಾದ ಅರುಣ್ ಪುತ್ತಿಲ,ಅನಿಲ್ ಕಣ್ಣರ್ನೋಜಿ,ಪ್ರಸಾದ್ ಬಿಕೆ. ಧನಂಜಯ ಕಲ್ಲಮ, ಹರೀಶ್ ಬಿಕೆ,ಪುರಂದರ ಗೌಡ ಇವರ ಉಪಸ್ಥಿತಿಯಲ್ಲಿ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಕೊರೊನಾ ಮುಂಡೂರಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿ ರೋಗ ಹರಡದಂತೆ ಸಾರ್ವಜನಿಕರು ಪಂಚಾಯತ್ ಆಡಳಿತದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.