ಪುತ್ತೂರು:ಅರಿಯಡ್ಕ ಗ್ರಾಮದ ಕೊಲ್ಲಾಜೆ ಎಂಬಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಶಿಕ್ಷಕಿಯೋರ್ವರ ಮನೆಗೆ ಬರೆ ಕುಸಿದಿದ್ದು ಮನೆಯ ಭಾಗವೊಂದು ಮಣ್ಣಿನಿಂದ ಕೂಡಿದ್ದು ಮಾಹಿತಿ ನೀಡಿದರು ಸ್ಥಳಕ್ಕೆ ಯವುದೇ ಅಧಿಕಾರಿಗಳು ಆಗಮಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಶನಿವಾರ ಈ ಘಟನೆ ನಡೆದಿದ್ದು ಸದ್ಯ ಇನ್ನು ಹೆಚ್ಚಿನ ಮಣ್ಣು ಕುಸಿಯುವ ಬೀತಿಯಲ್ಲಿದೆ.
ಸ್ಥಳಕ್ಕೆ ಇಂದು ಅರುಣ್ ಕುಮಾರ್ ಪುತ್ತಿಲ ಬೇಟಿ ನೀಡಿ ತಹಶೀಲ್ದಾರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ಉಪಸ್ಥಿತರಿದ್ದರು .



























