ದಿನಾಂಕ 27.05.2025 ರಂದು ಮಧ್ಯಾಹ್ನ ಸಮಯದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣಾ ಅಕ್ರ 54/2025 ៩០: 191[1], 191[2], 191[3], 118[1]. 118 [2], 109, 103 3 190 BNS 2023 ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣದಲ್ಲಿ ಆರೋಪಿಗಳ ಶೀಘ್ರ ಪತ್ತೆಗಾಗಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿ, 05 ತನಿಖಾ ತಂಡಗಳನ್ನು ರಚಿಸಿ ಆರೋಪಿ ಪತ್ತೆಕಾರ್ಯ ನಡೆಸಲಾಗಿರುತ್ತದೆ. ಸದ್ರಿ ತನಿಖಾ ತಂಡವು ದಿನಾಂಕ 29.05.2025 ರಂದು ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯವು ಪ್ರಗತಿಯಲ್ಲಿರುತ್ತದೆ.
ವಶಕ್ಕೆ ಪಡೆಯಲಾಗಿರುವ ಆರೋಪಿಗಳ ವಿವರ :-
1. ದೀಪಕ್(21) ತಂದೆ:ದಿ.ಯೋಗಿಶ್ ಪೂಜಾರಿ, ವಾಸ: ಮುಂಡರಕೋಡಿ ಮನೆ, ಕುರಿಯಾಳ ಗ್ರಾಮ, ಬಂಟ್ವಾಳ ತಾಲೂಕು, ದ.ಕ.ಜಿಲ್ಲೆ.
2 .ಪೃಥ್ವಿರಾಜ್ (21) ತಂದೆ: ಪ್ರಮೋದ್ ರಾಜ್ ಜೋಗಿ, ವಾಸ: ಭದ್ರಾಕಾಳಿ ದೇವಸ್ಥಾನ ಹತ್ತಿರ, ಶಿವಾಜಿ ನಗರ, ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲ್ಲೂಕು, ದ.ಕ ಜಿಲ್ಲೆ.
3.ಚಿಂತನ್(19) ತಂದೆ: ಸುರೇಶ ಬೆಳ್ಳಡ, ವಾಸ: ಶಿವಾಜಿನಗರ ಮನೆ, ಅಮ್ಮುಂಜೆ ಗ್ರಾಮ, ಬಂಟ್ವಾಳ ತಾಲೂಕು, ದ.ಕ.ಜಿಲ್ಲೆ