ವಿಟ್ಲ: ಬೈಕ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳಪದವು ಎಂಬಲ್ಲಿ ನಡೆದಿದೆ.
ಒಕ್ಕೆತ್ತೂರು ಮೂಲದ ಇಬ್ಬರು ಯುವಕರು ಮಂಗಳಪದವು ಕಡೆಗೆ ತೆರಳುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಬಾಕ್ಸೆಟ್ ಮಣ್ಣು ಸಾಗಾಟ ಮಾಡುತ್ತಿದ್ದ ಅದರ ಚಾಲಕ ಮಂಗಳಪದವು ಎಂಬಲ್ಲಿ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿದ್ದು, ಅದಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಬ್ಬರನ್ನೂ ಮಂಗಳೂರು ಆಸ್ಪತ್ರೆ ಗೆ ಕೊಂಡೊಯ್ಯಲಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಒಕ್ಕೆತ್ತೂರಿನ ಫಾರೀಸ್ ಮತ್ತು ಇರ್ಫಾನ್ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಲಾರಿ ಚಾಲಕ ಬೇಜಾಬ್ದಾರಿತನದಿಂದ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿ ಚಾ ಕುಡಿಯಲು ಹೋಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.



























