ವಿಟ್ಲ: ವಿಟ್ಲ ಮಂಗಳಪದವು ಎಂಬಲ್ಲಿ ನಿಂತಿದ್ದ ಮಣ್ಣಿನ ಲಾರಿ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಸವಾರ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳಪದವು ಎಂಬಲ್ಲಿ ನಡೆದಿದೆ.
ಒಕ್ಕೆತ್ತೂರು ಮೂಲದ ಇಬ್ಬರು ಯುವಕರು ಮಂಗಳಪದವು ಕಡೆಗೆ ತೆರಳುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಬಾಯ್ಸ್ಟ್ ಮಣ್ಣು ಸಾಗಾಟ ಮಾಡುತ್ತಿದ್ದ ಅದರ ಚಾಲಕ ಮಂಗಳಪದವು ಎಂಬಲ್ಲಿ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿದ್ದು, ಅದಕ್ಕೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಬ್ಬರನ್ನೂ ಮಂಗಳೂರು ಆಸ್ಪತ್ರೆ ಗೆ ಕೊಂಡೊಯ್ಯಲಾಗಿದ್ದು, ಇರ್ಫಾನ್ (19) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಹಸವಾರ ಫಾರಿಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ಬೇಜಾಬ್ದಾರಿತನದಿಂದ ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿ ಚಾ ಕುಡಿಯಲು ಹೋಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.



























