ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಪೋಸ್ಟ್ ಹಿನ್ನಲೆ ವಿಟ್ಲ ಠಾಣೆಯಲ್ಲಿ ವ್ಯಕ್ತಿಯೋರ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಪೆರುವಾಯಿ ಗ್ರಾಮದ ನಿವಾಸಿ ಯತೀಶ ಎಂಬಾತನು ʻʻಯತೀಶ್ ಪೆರುವಾಯಿʼʼ ಎಂಬ ಹೆಸರಿನ ಪೇಸ್ ಬುಕ್ ಖಾತೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ೦3 ಪೋಸ್ಟ್ ಗಳನ್ನು ಪ್ರಸಾರ ಮಾಡಿರುವುದಾಗಿದೆ. ಸದ್ರಿ ಪೋಸ್ಟ್ ಗಳಿಂದಾಗಿ ವಿಭಿನ್ನ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ದಿನಾಂಕ:31-05-2025 ರಂದು ಅ.ಕ್ರ: 72/2025 ಕಲಂ: 353(2) BNS 2023 ರಂತೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.