ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು.
ಸದ್ರಿ ಮುಂಜಾಗ್ರತಾ ಕ್ರಮವನ್ನು ವಿರೋಧಿಸಿ, ದಿನಾಂಕ 01-06-2025 ರಂದು ರಾತ್ರಿ ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ 1)ಪ್ರಮೋದ್ ರೈ, ನಂದುಗುರಿ, 2) ತಿಲಕ್ , ನಂದುಗುರಿ, 3) ಮೋಹನ, ಕೆರೆಕೋಡಿ, 4)ಚಂದ್ರಶೇಖರ, ನೂಜಿಬಾಳ್ತಿಲ, 5)ಮಹೇಶ್ ಕುಟ್ರುಪ್ಪಾಡಿ. 6)ಡೀಕಯ್ಯ ನೂಜಿಬಾಳ್ತಿಲ, 7) ಸುಜಿತ್ ಕುಟ್ರುಪ್ಪಾಡಿ., 8)ಶರತ್ ನಂದುಗುರಿ, 9)ಶ್ರೇಯತ್, ನಂದುಗುರಿ, 10)ಉಮೇಶ್, ನೂಜಿಬಾಳ್ತಿಲ, 11) ರಾದಾಕೃಷ್ಣ, ಕೆ. 12) ಜಯಂತ್, ಮತ್ತು ಇತರ ಮೂವರು ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಬಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿರುತ್ತಾರೆ.
ಆದ್ದರಿಂದ ಅವರುಗಳ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 39/2025 ಕಲಂ: 189(2),190 BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.


























