ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರನ್ನು ದಕ್ಷಿಣಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಹೊರಡಿಸುವ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿಲಾಗಿದೆ.
ಜೂನ್ 06 ರಂದು ಸ್ವತಃ ಅಥವಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿಂದೂ ಸಂಘಟನೆಗಳ ಕಾರ್ಯಕಾರತರೊಂದಿಗೆ ಒಡನಾಟದಲ್ಲಿದ್ದು ಹಲವರು ಪ್ರತಿಭಟನೆ ಇತ್ಯಾದಿ ವಿವಾದಾತ್ಮಕ ವಿಚಾರಗಳಲ್ಲಿ ಮುಂದಾಳತ್ವ ವಹಿಸಿರುವ ಸಾಮಾಜಿಕವಾಗಿಯೂ ಸಕ್ರೆಯರಾಗಿದ್ದು ಸ್ಥಳೀಯ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚು ಪ್ರಭಾವಿ ವ್ಯಕ್ತಿಯಾಗಿದ್ದು ಪ್ರಸ್ತುತ ಸಾರ್ವಜನಿಕ ಹೇಳಿಕೆಗಳು ಮತ್ತು ಕಾರ್ಯಚಟುವಟಿಗೆಗಳು ಧಾರ್ಮಿಕ ವಿಚಾರಗಳಲ್ಲಿ ಸಮಾಜದಲ್ಲಿ ಪರಿಣಾಮಕಾರಿಯಾಗಿ ಜನರ ಅಭಿಪ್ರಾಯ ರೂಪಿಸುವುದರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಾರ ಹಾಗೂ ಪ್ರಚಾರಗಳನ್ನು ಪಡೆದು ತೀವ್ರ ಸಂಚಲನವನ್ನು ಉಂಟು ಮಾಡುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡುವಂತದ್ದು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಕೋಮು ಸೂಕ್ಷ್ಮ ಮತ್ತು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವಂತಹ ಪ್ರವೃತ್ತಿಯವರಾಗಿದ್ದು ಅಂತಹ ಕೃತ್ಯಗಳನ್ನು ಮಾಡುವಂತಹದನ್ನು ಮುಂದುವರೆಸಿದಲ್ಲಿ ಸಮಾಜದಲ್ಲಿ ಜನರ ನಡುವೆ ಬಿನ್ನಾಭಿಪ್ರಾಯಗಳು ಏರ್ಪಟ್ಟು ಮತೀಯ ಗಲಭೆ, ಬೆನ್ನ ಜನರ ನಡುವೆ ಕಲಹ, ಹೊಡೆದಾಟ, ದೊಂಬಿ ಇತ್ಯಾದಿಯಾಗಿ ಶಾಂತಿಭಂಗ ಉಂಟುಮಾಡಬಹುದಾದ ಸಂಭವನಿಯತೆ ಕಂಡುಬರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.