ಮಂಗಳೂರು : ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕೇಸ್, ಅರುಣ್ ಪುತ್ತಿಲ ಅವರಿಗೆ ಗಡಿಪಾರು ಆದೇಶ, ಅಮಾಯಕ ಹಿಂದೂ ಹುಡುಗರಿಗೆ ಕಿರುಕುಳ, ವಿವಿಧ ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲು, ಹೀಗೆ ಅಲ್ಪಸಂಖ್ಯಾತರ ಒಲೈಕೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ದಮನಕ್ಕೆ ಷಡ್ಯಂತ್ರ ಹೂಡಿ, ಹಿಂದೂ ಮುಖಂಡರ ವಿರುದ್ಧ ಪ್ರತೀಕಾರಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ‘ಕೈ’ ಹಾಕಿರುವುದು ಖಂಡನೀಯ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.




























