ಕಡಬ: ದಿನಾಂಕ: 04.06.2025 ರಂದು ಸಂಜೆ ಧಾರ್ಮಿಕ ಸಂಘಟನೆಗಳ ಪ್ರಮುಖರುಗಳು, ಕಡಬ ಪೊಲೀಸ್ ಠಾಣೆಯ ಬಳಿ ಕಡಬ – ಸುಬ್ರಹ್ಮಣ್ಯ ರಸ್ತೆಯಿಂದ ಕಡಬ ಪೊಲೀಸ್ ಠಾಣೆಗೆ ಬರುವ ರಸ್ತೆಯಲ್ಲಿ ನಿಂತು, ನವೀನ್ ನೆರಿಯ ಎಂಬಾತನು ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣವನ್ನು ಮಾಡಿರುತ್ತಾನೆ ಹಾಗೂ ತನ್ನ ಭಾಷಣದ ವೇಳೆ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಚೋದನಕಾರಿ ಮಾತನಾಡಿರುತ್ತಾನೆ.
ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಆತನ ವಿರುದ್ದ ದಿನಾಂಕ:04.06.2025 ರಂದು ಕಡಬ ಪೊಲೀಸ್ ಠಾಣಾ ಅ.ಕ್ರ 42/2025 ಕಲಂ: 353(2)BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.