ಫರಂಗಿಪೇಟೆ: ಬಸ್ ಢಿಕ್ಕಿಯಾಗಿ ಆಟೋ ಚಾಲಕನೊಬ್ಬ ಮೃತಪಟ್ಟ ಘಟನೆ ಹತ್ತನೇ ಮೈಲ್ಕಲ್ಲು ಎಂಬಲ್ಲಿ ಶುಕ್ರವಾರ ನಡೆದಿದೆ.
ಅಮೆಮ್ಮಾರ್ ನಿವಾಸಿ ಝಾಹಿದ್ (28) ಮೃತ ಯುವಕ.
ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುಗುವಾಗ ಮಂಗಳೂರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಝಾಹಿದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು, ತಾಯಿ ಹಾಗೂ ಮೂವರು ಸಹೋದರರರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.