ಬಂಟ್ವಾಳ: ವಿದ್ಯಾರ್ಥಿಯೋರ್ವ ಸ್ನಾನಕ್ಕೆ ಕೆರೆಗೆ ಇಳಿದು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ.
ಮೃತನನ್ನು ಕಾರಿಂಜೆ ಕಂಗಿಹಿತ್ಲು ನಿವಾಸಿ ಗೂಡಿನಬಳಿ ಯ ಪಿಯುಸಿ ವಿದ್ಯಾರ್ಥಿ ಚೇತನ್ (17) ಎಂದು ಗುರುತಿಸಲಾಗಿದೆ.
ಮೃತರು ತಂದೆ ತಾಯಿ ಸಹೋದರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.