ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಇದರ ವತಿಯಿಂದ ಬ್ಯಾಂಕಿನ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರವು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀಯಲ್ಲಿ ಜೂ.07 ರಂದು ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ‘’ಮಾಸ್ಟರ್ ಮೈಂಡ್ ಎಂಟರ್ಪ್ರೈಸಸ್ ಮಂಗಳೂರು’’ ಇದರ ಮುಖ್ಯಸ್ಥರಾದ ಶ್ರೀ ಶ್ರೀಶ ಕೆ.ಎಂ ಇವರು ಸಿಬ್ಬಂದಿಗಳಿಗೆ ‘’People Skill Development Program” ಕುರಿತು ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹೆಚ್ ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾದ ಶ್ರೀ ಮನೋರಂಜನ್ ಕೆ.ಆರ್, ನಿರ್ದೇಶಕರಾದ ಶ್ರೀ ದಯಾನಂದ ಆಳ್ವ ಕೆ, ಶ್ರೀ ಮೋಹನ್ ಕೆ.ಎಸ್. ಶ್ರೀ ಭಾಸ್ಕರ್ ಶೆಟ್ಟಿ, ಶ್ರೀ ದಿವಾಕರ ವಿ, ಶ್ರೀ ಸತೀಶ ಪಿ, ಶ್ರೀ ಪೂವಪ್ಪ ಎಸ್, ಶ್ರೀಮತಿ ಶುಭಲಕ್ಷ್ಮೀ , ಶ್ರೀಮತಿ ಜಯಂತಿ ಎಚ್.ರಾವ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದರು.
ತರಬೇತಿ ನಂತರ ಶ್ರೀ ಶ್ರೀಶ ಕೆ.ಎಂ ಇವರನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಗನ್ನಾಥ ಸಾಲಿಯಾನ್ ಹಾಗೂ ಪದಾಧಿಕಾರಿಗಳು ಸ್ಮರಣಿಕೆ ಹಾಗೂ ಹೂ ಗುಚ್ಛ ನೀಡಿ ಗೌರವಿಸಿದರು.