ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆ ವಾಕಿಂಗ್ ಮಾಡುತ್ತಿದ್ದ ಇಬ್ಬರು ಪ್ರತ್ಯೇಕ ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಮುತ್ತಿಡುವ ಮೂಲಕ ತನ್ನ ಕಾಮಚೇಷ್ಟೆ ಮೆರೆದ್ದವ ಸಿಕ್ಕಿಬಿದ್ದಿದ್ದಾನೆ.
ಒಬ್ಬಂಟಿ ಮಹಿಳೆಯರನ್ನು ಬಲವಂತವಾಗಿ ತಬ್ಬಿಕೊಂಡು ಮುತ್ತಿಡುವ ಕಾಮುಕನ ಹೆಸರು ಮದನ್. ಬೆಂಗಳೂರು ನಗರದ ವಿವಿಧ ಉದ್ಯಾನಗಳು, ಸಣ್ಣ ಪಾರ್ಕ್ಗಳು, ಮೈದಾನಗಳು ಸೇರಿದಂತೆ ಮಹಿಳೆಯರು ವಾಯು ವಿಹಾರ ಮಾಡುವ ಪ್ರಮುಖ ರಸ್ತೆಗಳನ್ನು ಈ ಕಾಮುಕನ ಅಟ್ಟಹಾಸ ಮಿತಿ ಮೀರಿತ್ತು.
ಪುಲಕೇಶಿ ನಗರದಲ್ಲಿ ಇಬ್ಬರು ಮಹಿಳೆಯರಿಗೆ ಮುತ್ತುಕೊಟ್ಟು ದೌರ್ಜನ್ಯ ಎಸಗಿದ್ದ, ಮೊಮೋಸ್ ಅಂಗಡಿ ಬಳಿ ನಿಂತಿದ್ದ ಯುವತಿಯ ತುಟಿಗೆ ಮುತ್ತಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದ ಕಾಮುಕ ಮದನ್, ಅದೇ ದಿನ ಪಾರ್ಕ್ ನಲ್ಲಿ ಮಹಿಳೆ ಒರ್ವರನ್ನು ಹಿಂಬಾಲಿಸಿ ಆಕೆಗೂ ಮುತ್ತಿಟ್ಟು ತಬ್ಬಿಕೊಂಡಿದ್ದ. ಈ ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜೂನ್ 6 ರಂದು ವಾಯು ವಿಹಾರಕ್ಕೆ ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬಳಿ ಬಂದು ತಬ್ಬಿಕೊಂಡು ಬಲವಂತವಾಗಿ ತುಟಿಗೆ ಮುತ್ತು ಕೊಟ್ಟಿದ್ದ. ಬಳಿಕ ಇದೇ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನೂ ತಬ್ಬಿ ಮುತ್ತು ಕೊಟ್ಟಿದ್ದಾನೆ. ಈ ಸಂಬಂಧ ಮಹಿಳೆ, ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿ ಮೇರೆಗೆ ಪೊಲೀಸರು ಕಾಮುಕ ಮದನ್ ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬಾಣಸವಾಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಸದ್ಯ ಪುಲಕೇಶಿ ನಗರ ಪೊಲೀಸರು, ಕಾಮುಕ ಮದನ್ ನನ್ನು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಮದನ್ ಅತಿಹೆಚ್ಚು ಅಶ್ಲೀಲ ನೋಡುತ್ತಿದ್ದ. ಬಳಿಕ ರಸ್ತೆಯಲ್ಲಿ ಬಂದು ಮಹಿಳೆಯರ ಮೇಲೆ ಎರಗುತಿದ್ದ ಎನ್ನುವುದು ಗೊತ್ತಾಗಿದೆ. ಇನ್ನು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮದನ್, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಎಂದು ತಿಳಿದುಬಂದಿದೆ.