ಬಂಟ್ವಾಳ: ಹೆಂಡತಿಯನ್ನು ಕೊಂದು ಗಂಡ ನೇಣಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ
ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಜೂನ್. 19 ರಂದು ನಡೆದಿದೆ.
ತಿಮ್ಮಪ್ಪ ರಾಮ ಮೂಲ್ಯ (52) ಮತ್ತು ಜಯಂತಿ (45) ಮೃತ ದಂಪತಿಗಳು.
ಜೂನ್ 19 ರಂದು ಬೆಳಗ್ಗೆ ಪತಿ ತಿಮ್ಮಪ್ಪ ರಾಮ ಮೂಲ್ಯ ಹಾಗು ಪತ್ನಿ ಜಯಂತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಅದು ವಿಕೋಪಕ್ಕೆ ತಿರುಗಿದೆ.
ನಂತರ ಪತಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಜಯಂತಿ ರವರ ತಂಗಿ ಸುಜಾತ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 72/2025 U/S 103 BNS ಪ್ರಕರಣ ದಾಖಲಾಗಿದೆ. ಮೃತ ತಿಮ್ಮಪ್ಪ ರಾಮನ ಅಣ್ಣ ನೀಡಿದ ದೂರಿನ ಮೇರೆಗೆ UDR No 25/2025 U/S 194 BNSS ರಂತೆ ಪ್ರಕರಣ ದಾಖಲಾಗಿದೆ.



























