ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಮಹತ್ವಕಾಂಕ್ಷೆಯ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನೂತನ ಶೈಕ್ಷಣಿಕ ವರ್ಷಾರಂಭ ಹಾಗೂ ಗ್ರಾಮೀಣ ಸರಕಾರಿ ಮಕ್ಕಳಿಗೆ ಉಚಿತ ಶಿಕ್ಷಣದ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭವು ಜೂನ್ 21 ಶನಿವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡರ ಭವನದ ಚುಂಚಶ್ರೀ ಮಿನಿ ಹಾಲ್ ನಲ್ಲಿ ನಡೆಯಲಿದೆ. ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಯ ಮೂಲಕ 50 ಸರಕಾರಿ ಶಾಲೆಗಳು ಮತ್ತು 26 ವಿವಿಧ ಕೇಂದ್ರಗಳಲ್ಲಿ 3,650 ವಿದ್ಯಾರ್ಥಿಗಳಿಗೆ ಈಗಾಗಲೇ ಕಂಪ್ಯೂಟರ್ ಕಲಿಸಿ ಕೊಡಲಾಗಿದ್ದು, ಸಾಂಕೇತಿಕ ಸರ್ಟಿಫಿಕೇಟ್ ವಿತರಣೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಛೇರ್ಮನ್ ಹಾಜಿ ಝಕರಿಯಾ ಜೋಕಟ್ಟೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಭಾಗವಹಿಸಲಿದ್ದಾರೆ.