ಬೆಂಗಳೂರು: ನಕಲಿ ಉತ್ಪನ್ನ ತಯಾರಿಕಾ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, 30 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬ್ರಾಂಡೆಡ್ ಜೀನ್ಸ್ ವಶಕ್ಕೆ ಪಡೆದ ಘಟನೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾದನಾಯಕನಹಳ್ಳಿ ಪೊಲೀಸರು ಶನಿವಾರ ತಡರಾತ್ರಿ ನಕಲಿ ಬ್ರಾಂಡೆಡ್ ಜೀನ್ಸ್ ತಯಾರಿಕಾ ಅಡ್ಡೆ ಮೇಲೆ ದಾಳಿ ನಡೆಸಿ ಪೂಮಾ, ನೈಕಿ ಬ್ರಾಂಡ್ನ ಲಕ್ಷಾಂತರ ಮೌಲ್ಯದ ನಕಲಿ ಉತ್ಪನ್ನ ಸೀಜ್ ಮಾಡಿದ್ದಾರೆ. ಅಲ್ಲದೇ ಲೆವಿಸ್, ಪೋಲೋ, ರಾಲ್ಫ್ ಲಾರೆನ್ ಬ್ರಾಂಡ್ ಜೀನ್ಸ್ ನಕಲು ತಯಾರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಎ.ಎ.ಫ್ಯಾಷನ್ಸ್ ಹೆಸರಿನಲ್ಲಿ ಬ್ರಾಂಡೆಡ್ ಜೀನ್ಸ್ ನಕಲಿ ತಯಾರಿಕೆ ಮಾಡಲಾಗುತ್ತಿತ್ತು. ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಗೋಡೌನ್ನಲ್ಲಿ ಬ್ರಾಂಡೆಡ್ ಬಟ್ಟೆಗಳ ನಕಲಿ ಪೀಸ್ ತಯಾರಿಕೆ ನಡೆಯುತ್ತಿತ್ತು. ಈ ಹಿನ್ನೆಲೆ ಮಾದನಾಯಕನಹಳ್ಳಿ ವ್ಯಾಪ್ತಿಯ ಬೈಲಕೋನೇನಹಳ್ಳಿಯಲ್ಲಿ ಪೊಲೀಸ್ ದಾಳಿ ನಡೆಸಿ ನಕಲಿ ಜೀನ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಫರೈಟ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.