ಯುವವಾಹಿನಿ ( ರಿ.)ವಿಟ್ಲ ಮತ್ತು ಬಿಲ್ಲವ ಸಂಘ (ರಿ.) ವಿಟ್ಲ ಹಾಗೂ ಮಹಿಳಾ ಘಟಕ ವಿಟ್ಲ ಇದರ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಕಾರದೊಂದಿಗೆ
ರಕ್ತದಾನ ಶಿಬಿರವು ಜೂ.29 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಯುವವಾಹಿನಿ (ರಿ.) ವಿಟ್ಲ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ್ ಕುಮಾರ್ ಪಡ್ಪು, ಪ್ರಥಮ ಉಪಾಧ್ಯಕ್ಷರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು,ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ ಡಾ ರಾಮಚಂದ್ರ ಭಟ್ ಕೆ, ಸಂದೀಪ್ ಪೂಜಾರಿ ಕೆಲಿಂಜ, ಗ್ರಾಮ ಪಂಚಾಯತ್ ಸದಸ್ಯರು ವೀರಕಂಭ, ಲಯನ್ ಸಂಜೀವ ಪೂಜಾರಿ, ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ, ಶ್ರೀ ಕೃಷ್ಣಪ್ಪ ಅಮೈ, ಸಂಘಟನಾ ಕಾರ್ಯದರ್ಶಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು
ಶ್ರೀಮತಿ ಮಮತಾ ಸಂಜೀವ ಪೂಜಾರಿ, ಅಧ್ಯಕ್ಷರು ಮಹಿಳಾ ಬಿಲ್ಲವ ಸಂಘ (ರಿ.) ವಿಟ್ಲ, ಯುವವಾಹಿನಿ ವಿಟ್ಲ ಇದರ ಕಾರ್ಯದರ್ಶಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 20 ಕ್ಕಿಂತಲೂ ಹೆಚ್ಚು ಭಾರಿ ರಕ್ತದಾನ ಮಾಡಿದ ಯುವವಾಹಿನಿಯ ಸದಸ್ಯರಾದ ವಿಶ್ವನಾಥ ಪೂಜಾರಿ ಅಳಿಕೆ, ಸಂದೀಪ್ ಪೂಜಾರಿ ವಿಟ್ಲ, ಸಂದೇಶ್ ಪೂಜಾರಿ ಕೆಲಿಂಜ ಇವರನ್ನು ಸನ್ಮಾನಿಸಲಾಯಿತು .37 ಜನ ರಕ್ತದಾನ ಮಾಡಿದರು.
ಯುವವಾಹಿನಿ (ರಿ.) ವಿಟ್ಲ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಥಿತಿಗಳನ್ನು ಸ್ವಾಗತಿಸಿದರು,ಚೈತನ್ಯ ಮತ್ತು ವೀಕ್ಷಣ್ಯ ಪ್ರಾರ್ಥನೆ ಮಾಡಿದರು ಉದಯ ಕುಮಾರ್ ಕೆಲಿಂಜ ಕಾರ್ಯಕ್ರಮ ನಿರೂಪಣೆ ಮಾಡಿದರು, ಜೊತೆಕಾರ್ಯದರ್ಶಿ ನಿರ್ಮಲ ಧನ್ಯವಾದ ಮಾಡಿದರು.