ಪುತ್ತೂರು: 2025-30ನೇ ಅವಧಿಗೆ ಪುತ್ತೂರು ಧಾನ್ಯದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಯು. ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿನಾಂಕ: 01.07.2025ರಂದು ಸಂಘದ ಕಛೇರಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಶೋಭಾ ಎನ್.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ನಿರ್ದೇಶಕರಾಗಿ ಅಜಿತ್ ಕುಮಾರ್, ಕೆ. ಸಂಜೀವ ನಾಯಕ್, ಕೆ. ಸಂತೋಷ್ ಕುಮಾರ್, ಚಂದ್ರಶೇಖರ ರಾವ್ ಬಪ್ಪಳಿಗೆ, ನಹುಷ ಪಿ.ವಿ., ಯು. ಪೂವಪ್ಪ, ರಾಜೇಶ್ ಬನ್ನೂರು, ಜಯರಾಜ್ ಯು. ಲೋಕೇಶ್ ಹೆಗ್ಡೆ, ಸುಧಾ ನಾಗೇಶ್ ರಾವ್ ಮತ್ತು ಎಂ. ನಾರಾಯಣ ನಾಯ್ಕ ಅವಿರೋಧವಾಗಿ ಆಯ್ಕೆಗೊಂಡರು.
ನೂತನ ಆಡಳಿತ ಮಂಡಳಿಗೆ ಕಾರ್ಯದರ್ಶಿ ಯತೀಂದ್ರನಾಥ್ ಶುಭ ಹಾರೈಸಿದರು.