ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ವತಿಯಿಂದ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಸೆಪ್ಟೆಂಬರ್-27 ಹಾಗೂ 28 ರಂದು ನಡೆಯುವ ಪಿಲಿಗೊಬ್ಬು-2025 ಸೀಸನ್-3 ಇದರ ಪೂರ್ವಭಾವಿ ಸಭೆಯು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರ ಅಧ್ಯಕ್ಷತೆಯಲ್ಲಿ ದರ್ಭೆಯ ಶ್ರೀ ರಾಮ ಸೌಧ ಕಟ್ಟಡದಲ್ಲಿ ನಡೆಯಿತು.

ಸೆ.27 ರಂದು ಫುಡ್ ಫೆಸ್ಟ್ ಗೆ ಚಾಲನೆ ನೀಡಿ, ಸೆ.28 ರಂದು ಪಿಲಿಗೊಬ್ಬು ಕಾರ್ಯಕ್ರಮವು ನಡೆಯಲಿದೆ.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚೆ ನಡೆಯಿತು.ವೇದಿಕೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕೂರೇಲು,ಉಪಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಈಶಾನ್ಯ,ಸಂಚಾಲಕರಾದ ನಾಗರಾಜ್ ನಡುವಡ್ಕ,ಕಾರ್ಯಾದ್ಯಕ್ಷರಾದ ಶ್ರೀ ಸುಜಿತ್ ರೈ ಪಾಲ್ತಾಡ್ ಸೇರಿದಂತೆ ಸಂಸ್ಥೆಯ ನೂರಾರು ಸದಸ್ಯರು ಉಪಸ್ಥಿತರಿದ್ದರು.
