ದಿನಾಂಕ 08.07.2025 ರಂದು ಸಂಜೆ, ಅಪ್ರಾಪ್ತ ಪ್ರಾಯದ ಬಾಲಕ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಆತನ ಶಾಲಾ ಸಹಪಾಠಿಯೊಬ್ಬಳೊಂದಿಗೆ ಮಾತನಾಡುತ್ತಿರುವಾಗ ಯುವಕನೋರ್ನ ತಕರಾರು ತೆಗೆದು ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಆರೋಪಿಯನ್ನು ಮಂಜೇಶ್ವರ ಎನ್ಮಕಜೆ ನಿವಾಸಿ ಪದ್ಮರಾಜ್ ಎಂದು ಗುರುತಿಸಲಾಗಿದೆ.
ಆತ ಸ್ಥಳಕ್ಕೆ ಬಂದು, ಹಿಂದೂ ಹುಡುಗಿಯೊಂದಿಗೆ ಮಾತನಾಡುತ್ತಿರುವ ಬಗ್ಗೆ ತಕರಾರು ತೆಗೆದು, ಜೀವಬೆದರಿಕೆ ಒಡ್ಡಿ ಹೋಗಿರುತ್ತಾನೆ ಎಂದು ಬಾಲಕನ ಸಹೋದರ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 83/2025, ಕಲಂ: 126(2), 352, 351(3),196(1)(a) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.