ಪುತ್ತೂರು: ಪುರುಷರಕಟ್ಟೆ ಮಾಯಂಗಲ ರಸ್ತೆಯ ಅಂಗನವಾಡಿ ಎದುರುಗಡೆ ನಿಲ್ಲಿಸಿದ್ದ ಆಕ್ಟಿವಾ ಹೋಂಡಾ (ಕೆ.ಎ:21-ಇಡಿ 9849) ಕಳವಾದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಳ್ತಿಗೆ ಗ್ರಾಮದ ಕೆಮ್ಮಾರ ಉಮೇಶ್ ಎಂಬವರು ಪುರುಷರಕಟ್ಟೆಯಿಂದ ಮಾಯಂಗಲ ರಸ್ತೆಯಲ್ಲಿ ಬರುವ ಅಂಗನವಾಡಿಯ ಎದುರುಗಡೆ ಕಟ್ಟಡದ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಮನೆಗೆ ತೆರಳುವ ಸಮಯ ಅವರ ಸ್ಕೂಟರ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಅಲ್ಲೇ ಬಿಟ್ಟು ಹೋಗಿದ್ದರು.
ಬೆಳಗ್ಗೆ ಬಂದು ನೋಡಿದಾಗ ಸ್ಕೂಟರ್ ನಾಪತ್ತೆಯಾಗಿತ್ತು. ಸ್ಕೂಟರ್ ಅನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ಅವರು ದೂರು ನೀಡಿದ್ದಾರೆ. ಪೊಲೀಸರು ಕಲಂ 303(2) : 2023 5, ಪ್ರಕರಣ ದಾಖಲಿಸಿದ್ದಾರೆ.